ಮುಚ್ಚಿ

ಸಂಸ್ಥೆ ನಕಾಶೆ

ಸಂಘಟನಾ ಬಳ್ಳಿ 

‘ಗ್ರಾಮ’ವು ಕಂದಾಯ ಇಲಾಖೆಯ ಮೂಲಭೂತ ಆಡಳಿತ ಘಟಕವನ್ನು ರೂಪಿಸುತ್ತದೆ. ಇದು ಕಂದಾಯ ಆಡಳಿತಕ್ಕಾಗಿ ಒಂದು ಹಳ್ಳಿಯಾಗಿ ಭೂ ದಾಖಲೆಗಳಲ್ಲಿ ಗುರುತಿಸಲ್ಪಟ್ಟ ಸ್ಥಳೀಯ ಪ್ರದೇಶವಾಗಿದೆ. ರಾಜ್ಯವನ್ನು ವಿಭಾಗಗಳಾಗಿ, ವಿಭಾಗಗಳು ಜಿಲ್ಲೆಗಳಾಗಿ ಜಿಲ್ಲೆಗಳು ತಾಲೂಕುಗಳಾಗಿ, ತಾಲೂಕುಗಳು ಹೋಬಳಿಗಳಾಗಿ ಮತ್ತು ಹೋಬಳಿಗಳು ಹಳ್ಳಿಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿಯ ಜಿಲ್ಲೆಗಳಲ್ಲಿ ತಾಲೂಕು ಇಲ್ಲವೆ ತಾಲೂಕುಗಳನ್ನು, ಆದಾಯ ಉಪ-ವಿಭಾಗಳನ್ನಾಗಿ ರೂಪಿಸಲಾಗುತ್ತದೆ. ಬೀದರ ಜಿಲ್ಲೆಯು ಬೀದರ ಮತ್ತು ಬಸವಕಲ್ಯಾಣ ಎಂಬ ಎರಡು ಉಪ-ವಿಭಾಗಗಳನ್ನು ಹೊಂದಿದೆ. ಬೀದರಿನಲ್ಲಿ 8 ತಾಲೂಕುಗಳು ಇದ್ದು, ಬೀದರ ಉಪ-ವಿಭಾಗದಲ್ಲಿ ಬೀದರ ಹಾಗು  ಔರಾದ (ಬಿ) ಮತ್ತು ಬಸವಕಲ್ಯಾಣ ಉಪ-ವಿಭಾಗದಲ್ಲಿ ಭಾಲ್ಕಿ, ಹುಮನಾಬಾದ ಹಾಗು ಬಸವಕಲ್ಯಾಣ ತಾಲೂಕುಗಳು ಒಳಗೊಂಡಿರುತ್ತವೆ.  

ಉಪ-ವಿಭಾಗ ಮತ್ತು ತಾಲೂಕುಗಳು
ಉಪ ವಿಭಾಗ ತಾಲ್ಲೂಕುಗಳ
ಬೀದರ್

1. ಬೀದರ್

2. ಔರಾದ್

3. ಕಮಲನಗರ

ಬಸವಕಲ್ಯಾಣ್

1.ಬಸವಕಲ್ಯಾಣ್

2. ಹುಲಸೂರು

3. ಹುಮ್ನಾಬಾದ್

4. ಚಿಟಗುಪ್ಪಾ

5. ಭಾಲ್ಕಿ

ತಾಲ್ಲೂಕುಗಳು
ಕ್ರಮ ಸಂಖ್ಯೆ ತಾಲ್ಲೂಕು ಒಟ್ಟು ಹಳ್ಳಿಗಳು
1 ಔರಾದ್ 95
2 ಬಸವಕಲ್ಯಾಣ್ 97
3 ಭಾಲ್ಕಿ 133
4 ಬೀದರ್ 151
5 ಹುಮ್ನಾಬಾದ್ 50
6 ಕಮಲನಗರ 54
7 ಚಿಟಗುಪ್ಪಾ 37
8 ಹುಲಸೂರು 18
  ಒಟ್ಟು 635